ದಯಾಮಯ ಮಾತೆ ಚರ್ಚು, ಊಳ್ಳಾಲ (ಪೋರ್ಚುಗೀಸ್: Mercês ) ಇದು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಪೋರ್ಚುಗೀಸರು೧೫೬೮ರಲ್ಲಿ ಮಂಗಳೂರಿನ ಉಲ್ಲಾಳಎಂಬಲ್ಲಿ ಕಟ್ಟಲಾಗಿದೆ. ಇದನ್ನು ಇಟಲಿಯ ಪ್ರಯಾಣಿಕರಾದ ಪಿಯೆಟ್ರೊ ಡೆಲ್ಲಾ ವಲ್ಲೆ ಎಂಬವರು ೧೬೨೩ರ ತಮ್ಮ ಮಂಗಳುರು ಪ್ರದೇಶದ ಪ್ರವಾಸ ಕಥನದಲ್ಲಿ ಗುರುತಿಸಿದ್ಧಾರೆ. ಒಂದೆಡೆ ಸಮೃದ್ಧ ಹಸಿರು ಭೂಸಿರಿ ಹಾಗೂ ಮತ್ತೊಂದೆಡೆ ವಿಶಾಳವಾದ ಸಾಗರವನ್ನು ಹೊಂದಿದ್ದ ಉಳ್ಳಾಲ-ಪನೀರ್ ಪ್ರದೇಶ ಕ್ರೈಸ್ತ ಧರ್ಮದ ಕೇಂದ್ರವಾಗಿತ್ತು. ಇದು ಮಂಗಳೂರು ನಗರದ ದಕ್ಷಿಣಕ್ಕೆ ೧೫ ಕಿಮೀ ಅಂತರದಲ್ಲಿದ್ದು, ಜಿಲ್ಲಾ ಪ್ರಮುಖ ಕಛೇರಿಯಾಗಿತ್ತು. ಈ ಕೇಂ‍ದ್ರವು ಬಂಟ್ವಾಳ, ಮಂಗಳುರು ಹಾಗೂ ಮಂಜೇಶ್ವರ ಎಂಬ ಮೂರು ತಾಲ್ಲೂಕುಗಳ ೧೦ ಹಳ್ಳಿಗಳಿಗೆ ವಿಸ್ತರಿಸಲ್ಪಟ್ಟಿತ್ತು. ಇಲ್ಲಿಯ ಸದಸ್ಯರು ಪ್ರಮುಖವಾಗಿ ಕೂಲಿ ಕಾರ್ಮಿಕರು, ದೈನಂದಿನ ಕೂಲಿಗಳು, ಬಡವ ಹಾಗೂ ಸಣ್ಣ ಪ್ರಮಾಣದ ರೈತರಾಗಿದ್ದರು. ಉಳ್ಳಾಲ-ಪನೀರ್ ಪ್ರದೇಶದಲ್ಲಿ ಪ್ರಸತುತ ಅನೇಕ ವಿದ್ಯಾಸಂಸ್ಥೆಗಳು ಜನ್ಮತಾಳಿದ್ದರಿಂದಾಗಿ ಹಲವಾರು ಮಂದಿ ಇಲ್ಲಿಗೆ ವಲಸೆ ಬರುತ್ತಾರೆ. ಪ್ರಸ್ತುತ ೨೧೪೭ ಸದಸ್ಯರಿದ್ದಾರೆ. ಉಳ್ಳಾಲ-ಪನೀರ್ ಪ್ರದೇಶದಲ್ಲಿ ಶ್ರೀಲಂಕಾ ಅಪೋಸ್ತಲರಾದ ಭಾಗ್ಯವಂತ ಜೋಸೆಫ್ ವಾಜ್ ಅವರು ೩೧೮ವರ್ಷಗಳ ಹಿಂದೆ ಸೇವೆ ಸಲ್ಲಿಸಿದ್ಧರು. == ಟಿಪ್ಪಣಿಗಳು == ಟೆಂಪ್ಲೇಟು:---